ಕೊಹ್ಲಿಯಿಂದ ಕಲಿಯಬಹುದಾದ ಪಾಠಗಳು

  1. ಹೆದರಬೇಡ, ಎದುರಿಸು ಸಾಧ್ಯವಾದರೆ ಹೆದರಿಸು

ಕೊಹ್ಲಿ ಭಾರತೀಯ ತಂಡಕ್ಕೆ ಸೇರಿದ ಹೊಸತರಲ್ಲಿ.ಅಸೀಸ್ ನ ಕಾಲೆಳೆಯುವಿಕೆಗೆ ಮಲಿಂಗಾ, ಪಾಕಿಗಳ ವೇಗದ ಬೌಲಿಂಗ್ ಗೆ ಭಾರತ ಮಂಕಾದಂತೆ ಕಾಣುತ್ತಿತ್ತು. ಆದರೆ ಈ ಯುವಕನ ಬಿಸಿರಕ್ತ ಅವರ ಎಲ್ಲ ತಂತ್ರ ಕುತಂತ್ರಗಳಿಗೆ ತಣ್ಣೀರೆರೆಚ್ಚಿತ್ತು. ಜೀವ ಹಿಂಡುವ ಟೆಸ್ಟ್ ಪಂದ್ಯಗಳಲ್ಲಂತೂ ಕೊಹ್ಲಿ ಆಡುವ ಐದು ದಿನವೂ ಎದುರಾಳಿಗಳನ್ನು ಅದುರಾಡಿಸಿಬಿಡುತ್ತಿದ್ದರು. ಅವರ ಬ್ಯಾಟ್ ಮಾತನಾಡದಿದ್ದಗಲು ಕೂಡ ತಮ್ಮ ತಂಡದ ಬೌಲರ್ಗಳನ್ನು ಹುರಿದುಂಬಿಸಿ ಅಕ್ಷರಶಃ ಬೆಂಕಿಚೆಂಡುಗಳಿಂದ ಎದುರಾಳಿಗಳಿಗೆ ಸವಾಲೆಸೆಯುತ್ತಿದ್ದರು.ನಾವು ಕೂಡ ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಹೆದರುತ್ತೇವೆ. ಎದುರಿಸುವುದು ಸೂಕ್ತ ಮಾರ್ಗ


  1. ಬದಲಾಗು, ಬದಲಾಯಿಸು

"ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವವನ ದೇಹ ಹೀಗಿರುವುದಿಲ್ಲ "  ಎಂಬ ಒಂದೇ ಉದ್ದೇಶದಿಂದ ಕೊಹ್ಲಿ ತಮ್ಮ ದೇಹವನ್ನು ದಂಡಿಸಿ chubby ಆಗಿದ್ದವರು ಫಿಟ್ ಆಗಿ ತಂಡಕ್ಕೆ ಮರಳಿದರು. ತಂದನಂತರವೇ ಜಗತ್ತಿಗೆ ನಿಜವಾದ ವಿರಾಟ ರೂಪ ದರ್ಶನ. ಅದೇ ಫಿಟ್ನೆಸ್ ಪ್ರಜ್ಞೆಯನ್ನು ತಂಡಕ್ಕೆ ತಂದು ಕ್ರಿಕೆಟ್ ಜಗತ್ತಿನಲ್ಲಿ ಕ್ರಾಂತಿಯ ಕಿಡಿ ಹಚ್ಚಿದರು.

ನಾವು ನೀವು ಕೂಡ ಪರಿಸ್ಥಿತಿಗೆ ತಕ್ಕ ಹಾಗೆ ಬೆಳೆಯುತ್ತ ಹೋಗಬೇಕು.ನೆನಪಿರಲಿ ವೃತ್ತಿ ಯಾವುದೇ ಇರಲಿ ದೈಹಿಕ ಕ್ಷಮತೆ ಹೆಚ್ಚಿಸಿಕೊಂಡು ಫಿಟ್ ಆಗಿರುವುದು ನಮ್ಮ ಕರ್ತವ್ಯ ಎಂದು ಅರಿಯೋಣ ಅದರಿಂದ ಹಲವು ಪ್ರಯೋಜನಗಳಿವೆ.


  1. ನಾಯಕನೆಂದರೆ ಗೆಲ್ಲುವವನಷ್ಟೇ ಅಲ್ಲ, ಸೋಲಲ್ಲೂ ನಿಲ್ಲುವವನು

ವಿರಾಟ್ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದಾಗ ಹಲವು ಗೆಲುವು, ಹಲವು ಟ್ರೋಫಿಗಳನ್ನು ತಂಡಕ್ಕೆ ತಂದವರು.ಹಾಗೆಂದು ಅವರ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ,ಕೆಲವು ಸೋಲುಗಳೂ ಎದುರಾದವು. ಹಾಗಾದಾಗಲೂ ಅವರು ತಂಡವನ್ನು ದೂರದೆ ತಮ್ಮ ಆಟಗಾರರ ಪರವಾಗಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ರೋಹಿತ್, ಸಿರಾಜ್ ನಂತಹ ಆಟಗಾರರು ತಮ್ಮ ಫಾರ್ಮ್ ಕಳೆದುಕೊಂಡಾಗಲೂ ಅವರ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಮುಂದುವರೆದರು. ಆ ಆಟಗಾರರು ನಂಬಿಕೆಯನ್ನು ಉಳಿಸಿಕೊಂಡರು.

ನಮಗೂ ಅಷ್ಟೇ ಸೋಲು ಹಲವು ಪಾಠಗಳನ್ನು ಕಲಿಸುತ್ತೆ, ಅದನ್ನು ಕಲಿಯೋಣ. ಗೆಲುವು ಕ್ಷಣಿಕವಷ್ಟೇ. ಸಂಭ್ರಮಿಸಿ ಮುನ್ನಡೆಯೋಣ.


  1. ಸೋಲು ಗೆಲುವು ಏನೇ ಇರಲಿ. ನಿರಂತರ ಅಭ್ಯಾಸ, ಪರಿಶ್ರಮ ಅಗತ್ಯ.

ಕೊಹ್ಲಿ ತಮ್ಮ ಚಿಕ್ಕ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದಾರೆ, ಹಲವಾರು ಟ್ರೋಫಿ, ಹಲವಾರು ಮ್ಯಾಚ್ ವಿನ್ನಿಂಗ್ ಆಟಗಳನ್ನು ಆಡಿದ್ದಾರೆ.ಹಾಗೆಯೇ ತಮ್ಮ ಫಾರ್ಮ್ ಕಳೆದುಕೊಂಡು ಒದ್ದಾಡಿದ್ದಾರೆ. ಏನೇ ಆದರೂ ಅವರು ತಮ್ಮ ಪ್ರಯತ್ನ ಪರಿಶ್ರಮಗಳನ್ನು ನಿತ್ಯ ವಹಿಸುತ್ತಿದ್ದರು. ಹತ್ತು ಬಾರಿ ಬಿದ್ದರು, ನಂಬಿಕೆಯಿಟ್ಟು ಮುಂದುವರೆದರು. ಈಗ ಮತ್ತೊಮ್ಮೆ ತಾವೇಕೆ ಕಿಂಗ್ ಎಂದು ಸಾದರ ಪಡಿಸುತ್ತಿದ್ದಾರೆ.

ನಮಗೂ ಈ ಸೋಲು ಗೆಲುವುಗಳೆಲ್ಲ ಆಟದಲ್ಲಿ ಸಾಮಾನ್ಯ ನಮ್ಮ ಪ್ರಯತ್ನ ಪರಿಶ್ರಮ ನಿರಂತರವಾಗಿರಬೇಕು ಅಷ್ಟೇ.


  1. ರಾಜನಾಗುವುದು ಸಿಂಹಾಸನದಿಂದಲ್ಲ, ಹೃದಯ ಸನ್ಮಾನದಿಂದ.

ವಿರಾಟ್ರವರ ಕೆಟ್ಟ ದಿನಗಳು ಅವರ ತಂಡದ ನಾಯಕತ್ವದಿಂದಲೂ ಕೆಳಗಿಳಿಸಿತ್ತು ಆದರೆ ಅವರು ಇಂದಿಗೂ ತಂಡದ ಮಾರ್ಗದರ್ಶಿ. ತಂಡದ ಫಿಲ್ಡ್ ಸೆಟ್ಟಿಂಗ್, ಬೌಲಿಂಗ್ ಆಕ್ರಮಣ ಮುಂತಾದವುಗಳಲ್ಲಿ ಇಂದಿಗೂ ಅವರು ತಮ್ಮ ಅನುಭವವನ್ನು ಧಾರೆ ಎರೆಯುತ್ತಾರೆ. ಪ್ರತಿ ಆಟಗಾರನನ್ನು ಹುರಿದುಂಬಿಸುತ್ತಾರೆ. ಹಲವು ಆಟಗಾರರು ಇವರನ್ನು ಸ್ಫೂರ್ತಿಯ ಸೆಲೆಯಾಗಿ ಕಾಣುತ್ತಾರೆ. ಆಟದಲ್ಲಿ ಎದುರಾಳಿಗೆ ಸಿಂಹಾಸ್ವಪ್ನವಾದರೂ, ಹೊರಗೆ ಅವರೊಬ್ಬ ಉತ್ತಮ ಗೆಳೆಯರಂತೆ ಬೆರೆಯುತ್ತಾರೆ. ಈ ಗುಣಗಳಿಂದ ಅವರು ಕೋಟ್ಯಂತರ ಅಭಿಮಾನಿಗಳ, ಕ್ರಿಕೆಟ್ ಪ್ರೇಮಿಗಳ ಹೃದಯ ಸಾಮ್ರಾಜ್ಯದ ರಾಜನಾಗಿದ್ದಾರೆ.

ನಾವು ಕೂಡ ಎಷ್ಟೇ ಒಳ್ಳೆಯ ಮಟ್ಟ ತಲುಪಿದರೂ ನಾವು ಮನುಷ್ಯರು ಎಂಬುದನ್ನು ಮರೆಯದಿರೋಣ. ದೀಪವಾಗಿ ಉರಿದರೂ ಸರಿ ಇತರರಿಗೆ ಬೆಳಕಾಗೋಣ


  1. ನಿನ್ನ ಇಷ್ಟ ನಿನಗೆ ಕಷ್ಟವಾಗಬಹುದು, ಅದು ಸಹಜ..

   ಟೆಸ್ಟ್ಗಳಲ್ಲಿ ಕೊಹ್ಲಿ ಮತ್ತು ಆನ್ಡರ್ಸನ್ ದುಷ್ಮನಿ ಎಲ್ಲರಿಗೂ ಗೊತ್ತೇ ಇದೆ. ಕೊಹ್ಲಿಯ ಬಲು ಇಷ್ಟದ ಕವರ್ ಡ್ರೈವ್ ಆನ್ಡರ್ಸನ್ ಸ್ವಿನ್ಗ್ ಗೆ edge ಆಗಿ ಕೀಪರ್ ಅಥವಾ ಸ್ಲಿಪ್,ಪಾಯಿಂಟ್ ಫೀಲ್ಡರ್ ಕೈ ಸೇರುತ್ತಿತ್ತು.೫ನೇ,೬ನೇ ಸ್ಟಂಪ್ ಚೆಂಡನ್ನು ಕವರ್ಸ್ ಕಡೆ ಬಾರಿಸಲು ಹೋಗಿ ಹಲವು ಬಾರಿ ಔಟಾಗಿದ್ದರು. ಈ ಘಟನೆಯ ಮೇಲೆ ಹಲವು troll ಗಳಾದವು. ಆದರೆ ನಂತರವೂ ಕೊಹ್ಲಿ ತಮ್ಮ ಹೊಡೆತದ ಮೇಲೆ ಹೆಚ್ಚು ಅಭ್ಯಾಸ ಮಾಡಿದರು ಆನ್ಡರ್ಸನ್ ಸ್ವಿನ್ಗ್ ಗೆ ಕಿಂಗ್ ಉತ್ತರ ನೀಡಿದರು.

ಹೀಗೆ ಕೆಲವೊಮ್ಮೆ ನಮ್ಮ ಇಷ್ಟದ ವಿಷಯವೇ ಜೀವನದಲ್ಲಿ ನಮಗೆ ಕುತ್ತು ತರುವುದುಂಟು. ಆಶ್ಚರ್ಯ ಬೇಡ, ಬೇಸರವೂ ಬೇಡ. ಇದು ಸಹಜ. ಅರಿತು ಮುನ್ನಡೆಯೋಣ


  1. ಅಹಂಕಾರಕ್ಕೂ, ಆತ್ಮವಿಶ್ವಾಸಕ್ಕೂ ಇರುವ ತೆಳುಗೆರೆ ಅರಿತುಕೊ.

ಹಾಗಂತ ಕೊಹ್ಲಿ ಸಂಪೂರ್ಣರು ಎಂಬುದು ಇಲ್ಲಿ ವೇದ್ಯವಲ್ಲ. ದೊಡ್ಡ ಯಶಸ್ಸಿನ ಅಲೆಗಳಲ್ಲಿ ತೇಲಿದಾಗ. ಅಧಿಕಾರದ ಶಕ್ತಿಯಿಂದ ತಮ್ಮ ಇಚ್ಛೆಗೆ ಬಂದಂತೆ ವರ್ತಿಸಿದಾಗ ಅವರು ಟೀಕೆಗೂ ಗುರಿಯಾಗಿದ್ದಾರೆ.ಆದರೆ ಸಾಲು ಸೋಲುಗಳು ಅವರಿಗೆ ಹಲವು ಪಾಠಗಳನ್ನು ಕಲಿಸಿವೆ. Put things into right perspective ಎಂಬುದು ಅವರಿಗೂ ಅರ್ಥವಾಗಿದೆ. ಕಲಿಯುವಿಕೆ ಎಂದಿಗೂ ನಿಲ್ಲುವುದಿಲ್ಲ. ಆತ್ಮವಿಶ್ವಾಸ ಹೆಚ್ಚುವುದು ಕಲಿಕೆಯಿಂದ.

ನಾವು ಅಷ್ಟೇ ಅಹಂಕಾರದಿಂದ ಕುರುಡಾಗಬಾರದು, ಹಾಗಂತ ನಮ್ಮ ಸಾಮರ್ಥ್ಯಗಳನ್ನೂ ಮರೆಯಬಾರದು.


  1. ಆಕ್ರಮಣಕಾರಿಯಾಗಿರು, ಆದರೆ ಪರಿಸ್ಥಿತಿ ಬೇಡಿದಾಗ ಸಮಾಧಾನದಿಂದಿರು

ವಿರಾಟ್ ಅವರ ಆಕ್ರಮಣಕಾರಿ ಮನೋಭಾವ ಎಲ್ಲರಿಗೂ ಗೊತ್ತೇ ಇದೆ. ಅದಕ್ಕಾಗಿ ಹಲವಾರು ಜನ ಅವರನ್ನು ಪ್ರೀತಿಸುತ್ತಾರೆ, ಹಲವಾರು ಜನ ದ್ವೇಷಿಸುತ್ತಾರೆ. ಕೆಲವೊಂದು ಸಮಯಗಳಲ್ಲಿ ಅವರ ಬ್ಯಾಟ್ ಮಾತಾಡದೆ ಇದ್ದಾಗ ಅವರು anchor ನಂತೆ ಸಿಂಗಲ್, ಡಬಲ್ ಗಳನ್ನು ಆಡಿ ಸಮಾಧಾನದಿಂದ ಒತ್ತಡವನ್ನು ನಿರ್ವಹಿಸುತ್ತಿದ್ದರು. ಆದರೆ ಅವರು ಕೊನೆ ತನಕ ಕ್ರೀಸ್ನಲ್ಲಿ ಇದ್ದರೆ ಎದುರಾಳಿಗಳಿಗೆ ಅದೇ ಕೊನೆ ಎಂಬುದು ಮತ್ತೊಮ್ಮೆ ಮಗದೊಮ್ಮೆ ನಾವು ಕಂಡ ಸತ್ಯ.


  1. ಬೇಕಿರುವುದು ನಿನ್ನ ಗೆಲುವು ಮಾತ್ರ, ನೀನಲ್ಲ..

ವಿರಾಟ್ ಇಷ್ಟು ಸುದ್ದಿಯಲ್ಲಿರುವುದು ಅವರು ಕೊಟ್ಟ ಗೆಲುವಿನಿಂದ, ಹಲವಾರು ಬಾರಿ ಗೆದ್ದಿದ್ದರಿಂದ. ಹಾಗಾಗಿ ಜಗ ನೋಡುವುದು ಗೆಲ್ಲುವ ಕುದುರೆಯನ್ನು ಮಾತ್ರ. ಸೋತವರು ಇದ್ದಾರೋ ಇಲ್ಲವೋ ಎನ್ನುವುದ ಕೇಳುವವರು ಇಲ್ಲ. ಸೋತಾಗ ತಮ್ಮದೇ ಕೋಚ್, ತಮ್ಮದೇ ತಂಡ ವಿರಾಟ್ ಅವರನ್ನು ಮರೆಯುವ ಹಂತಕ್ಕೆ ಬಂದಿತ್ತು ಆದರೆ ಸಂಕಷ್ಟ ಪುನಃ ವೀರನೊಬ್ಬನ ಕಥೆಯನ್ನು ನೆನಪಿಸಿತ್ತು. ನಾಳೆಯ ದಿನವೂ ವಿರಾಟ್ ಉಳಿಯಬೇಕಾದರೆ ಗೆಲ್ಲಲೇ ಬೇಕು. ಇದು ಒಪ್ಪಿಕೊಳ್ಳಲು ಕಠಿಣ ಆದರೆ ಕಡು ಕಹಿ ಸತ್ಯ.

ನಮ್ಮ ಬಳಿ ಎಲ್ಲ ಇದ್ದರೆ ಎಲ್ಲವೂ. ಇಲ್ಲವಾದರೆ ಯಾರೂ ಇಲ್ಲ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಆ ಸಮಯದಲ್ಲೂ ಜೊತೆಗಿರುವವರು ಯಾರು ಎಂಬುದು ಪರಿಸ್ಥಿತಿಯೇ ತೋರಿಸುತ್ತದೆ


ಇವಿಷ್ಟು ನನ್ನ ಗಮನಕ್ಕೆ ತೋಚಿದ್ದು.ನೀವು ಏನಾದರು ಗಮನಿಸಿದ ವಿಚಾರವಿದ್ದರೆ ಕಾಮೆಂಟ್ ಮಾಡಿ. ಎಲ್ಲರೂ ತಿಳಿಯಲಿ ಎಲ್ಲರೂ ಕಲಿಯಲಿ. ಎಲ್ಲರಿಗೂ ಒಳ್ಳೆಯದಾಗಲಿ..

Write a comment ...

Hemanth Londhe

Show your support

ಬರಹಗಳನ್ನು ಬೆಂಬಲಿಸಲು

Write a comment ...