Description
ಕಥಾನಕ" ಇದರಲ್ಲಿನ ಹನ್ನೊಂದು ಕಥೆಗಳು ಜೀವನ, ಕರುಣೆ, ಹಸಿವು, ಸುಖ.. ಹೀಗೆ ಪ್ರತಿಯೊಬ್ಬರೂ ಅನುಭವಿಸುವ ಭಾವಗಳು ಇಲ್ಲಿ ಕಥೆಗಳಾಗಿ ರೂಪುಗೊಂಡಿವೆ. ಈ ಕಥೆಗಳನ್ನು ಎರಡು ವರ್ಷಗಳ ಕಾಲಮಾನದಲ್ಲಿ ಬರೆದದ್ದು. ಹೊಸ ಹುಡುಗ ಪ್ರೇಮಕಥೆಗಳನ್ನು ಹಿಂಡಾಗಿ ಬರೆದಿರುತ್ತಾನೆ ಎಂದುಕೊಂಡರೆ ಅದು ತಪ್ಪು. ಪ್ರತಿಯೊಂದು ಕಥೆಯೂ ಒಂದು ಸಂಶೋಧನೆ, ಹಲವು ಸಂವೇದನೆ.ಅವನ್ನು ಗ್ರಹಿಸಲು ಈ ಕಥೆಗಳನ್ನು ಓದಲೇ ಬೇಕು.
ಕೆಲವೇ ಸಾಲುಗಳಲ್ಲಿ ಹಲವನ್ನು ಹೇಳುವ 'ಕಿರುಗತೆಗಳು'. ಮೀನುಗಾರನೊಬ್ಬ ಜೀವನ್ಮರಣದ ಅಪಾಯದಲ್ಲಿ ಎಣಿಸುವ 'ಕಡಲ ಅಲೆಗಳ ಲೆಕ್ಕ'.ಇಂದ್ರನ ವಜ್ರಾಯುಧ ಕಳುವಾದರೆ ಹೇಗಿರಬಹುದು? ಎಂಬ ಯೋಚನೆಯಲ್ಲಿ ಬರೆದ ಕಾಲ್ಪನಿಕ ಪೌರಾಣಿಕ ಪತ್ತೇದಾರಿ ಕಥೆ. 'ಶತಧಾರ'.ಶ್ವಾನವೊಂದರ ಶ್ವಾಸವನ್ನು ಗೌರವಿಸುವ 'ಬಡಪಾಯಿ'. ನಂಬಿಕೆ ಕಳೆದುಕೊಂಡ ಜೀವದಲ್ಲಿ ಹುರುಪನ್ನು ಹುಟ್ಟಿಸುವ 'ಸಾರ್ಥಕ್ಯ'. ದಾನ ಧರ್ಮದ ನಿಜ ಬಣ್ಣಗಳ ತೋರಿಸುವ 'ಅಕ್ಕಿಚೀಲದ ಆತ್ಮಕಥೆ'. ಪ್ರಥಮ ಭಾಗದಲ್ಲಿ ಪ್ರಕೃತಿ, ಇತಿಹಾಸ, ವಿನಾಶವನ್ನು ಬಿಂಬಿಸುವ 'ಸೀತಾಪುರದ ಕಲ್ಲಿನ ಜೋಪಡಿ' ದ್ವಿತೀಯ ಭಾಗದಲ್ಲಿ ಧೂಮಪಾನದ ದಾರಿದ್ರ್ಯವನ್ನು ದೂರ ಮಾಡುವತ್ತ ಸಾಗುತ್ತದೆ.'ರಕ್ತವರ್ಣಚಿತ್ರ' ಈ ಕಥೆಗಳ ನಡುವಿನ ಒಂದು ಪರಿಶುದ್ಧ ಪ್ರೀತಿಯ ಹುಡುಕಾಟ, ಅದನ್ನು ಓದಿ ನೀವೇ ಅನುಭವಿಸಬೇಕು. ಹಸಿವು, ಅನ್ನ, ಅಮ್ಮ ಕರುಣೆಯ ಪರಿಯ ಕಥೆ 'ಬದಲಾವಣೆ'. ದೇವರು ಧರ್ಮಗಳ ತಾಕಲಾಟವನ್ನು ತಹಬದಿಗೆ ತರುವ 'ಧರ್ಮ'. ಮದ್ಯಪಾನದ ವಿರುದ್ಧ ಹುಡುಗನೊಬ್ಬನ ಹೋರಾಟದ ಕಥೆ 'ಉರಿವ ನಾವೆ'.ಈ ಪುಸ್ತಕದ ಹೂರಣ.
Write a comment ...